ಭರಣಿ 
ಮೇಷ ರಾಶಿಗೆ ಸೇರಿದ ನಕ್ಷತ್ರಗಳ ಪೈಕಿ ಒಂದು 41 (ಏರೀಸ್). ವಿಷುವದಂಶ 27010'35", ಘಂಟಾವೃತ್ತಾಂಶ 2 ಗಂ 48 ಮಿ 41 ಸೆ, ಕಾಂತಿಮಾನ 3.68, ಸೂರ್ಯನಿಂದ ದೂರ 150 ಜ್ಯೋತಿರ್ವರ್ಷಗಳು, ನಕ್ಷತ್ರರೋಹಿತ ವರ್ಗೀಕರಣದ ರೀತ್ಯ ಇದನ್ನು ಃ8 ಗುಂಪಿಗೆ ಸೇರಿಸಿದೆ. ಈ ನಕ್ಷತ್ರವನ್ನು ವೃಷಭ ರಾಶಿ (ಟಾರಸ್), ಪಾರ್ಥ ನಕ್ಷತ್ರಪುಂಜ (ಪರ್ಸಿಯಸ್), ತ್ರಿಕೋಣಿ ನಕ್ಷತ್ರಪುಂಜ (ಟ್ರಯಾಂಗ್ಯುಲಮ್) ಮತ್ತು ಮೇಷರಾಶಿಯ ಇತರ ನಕ್ಷತ್ರಗಳು ಸುತ್ತುವರಿದಿವೆ.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ